12 ವರ್ಷಗಳ ಬಳಿಕ ಕುಂಭದ್ರೋಣ ಮಳೆಗೆ ಮಾಯಾನಗರಿ ಮುಂಬೈ ತತ್ತರ

ಮುಂಬೈ: ಬರೋಬ್ಬರಿ 12 ವರ್ಷಗಳ ಬಳಿಕ ಮಾಯಾನಗರಿ ಮುಂಬೈ ಭಾರೀ ಮಳೆಗೆ ಕಂಗಾಲಾಗಿದೆ.
ಮಂಗಳವಾರ ಮುಂಜಾನೆಯಿಂದ ಬಿಟ್ಟೂಬಿಡದೆ ಧಾರಾಕಾರ ಮಳೆಯಾಗುತ್ತಿದ್ದು, ಎಲ್ಲೆಡೆ ಮಳೆ ನೀರು ತುಂಬಿಕೊಂಡು ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನಜೀವನ ಸಂಕಷ್ಟಕ್ಕೊಳಗಾಗಿದೆ. ಮಳೆಯ ಜೊತೆ ಗಾಳಿಯೂ ಕಾಣಿಸಿಕೊಂಡಿದ್ದು, ಹಲವೆಡೆ ಹಾನಿ, ನಷ್ಟ ಉಂಟಾಗಿದೆ. 2005 ಬಳಿಕ ಕಾಣಿಸಿಕೊಂಡ ಭಾರೀ ಮಳೆ ಇದಾಗಿ ಎಂದು ಹೇಳಲಾಗಿದೆ.

LEAVE A REPLY