ಸ್ವಯಂ ಘೋಷಿತ ದೇವಮಾನವ ರಾಮ್‌ಪಾಲ್‌ಗೆ ಕೊಂಚ ರಿಲೀಫ್ ನೀಡಿದ ಕೋರ್ಟ್

ನವದೆಹಲಿ: ಹಲವು ಆರೋಪಗಳನ್ನು ಎದುರಿಸುತ್ತಿರುವ ಇನ್ನೋರ್ವ ಸ್ವಯಂ ಘೋಷಿಸಿತ ದೇವ ಮಾನವ ರಾಮ್‌ಪಾಲ್‌ಗೆ ಕೋರ್ಟ್ ಕೊಂಚ ರಿಲೀಫ್ ನೀಡಿದೆ.
ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳಲ್ಲಿ ರಾಮ್‌ಪಾಲ್ ನಿರ್ದೋಷಿ ಎಂದು ಹಿಸಾರ್ ಹೈಕೋರ್ಟ್ ಇಂದು ತೀರ್ಪು ನೀಡಿದೆ. ೨೦೧೪ ರಲ್ಲಿ ರಾಮ್‌ಪಾಲ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವುದು, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಈ ಎರಡು ಪ್ರಕರಣಗಳಿಗೆ ಸಂಬಂಧಿಸಿ ಇಂದು ವಿಚಾರಣೆ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಈ ಪ್ರಕರಣಗಳಿಂದ ರಾಮ್‌ಪಾಲ್‌ರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ರಾಮ್‌ಪಾಲ್ ವಿರುದ್ಧ ದೇಶದ್ರೋಹ ಸೇರಿದಂತೆ ಹಲವು ಪ್ರಕರಣಗಳು ಕೂಡ ಬಾಕಿ ಇದ್ದು, ಆ ಪ್ರಕರಣಗಳು ವಿಚಾರಣೆ ಚಾಲ್ತಿಯಲ್ಲಿದೆ.

LEAVE A REPLY