ಕರಾವಳಿ ಹಾಗೂ ‘ಮಳೆ’ನಾಡಲ್ಲಿ ಮಘೆ ಮಳೆಗೆ ಉಘೇ ಉಘೇ!!

ಮಂಗಳೂರು: ಕರಾವಳಿ ಜಿಲ್ಲೆಗಳಿಗೆ ಜಲಸಮೃದ್ಧಿಯನ್ನು ಮಘೆ ಮಳೆ ಮೊಗೆಮೊಗೆದು ಕೊಡುತ್ತಿದೆ.
ದಕ್ಷಿಣ ಕನ್ನಡ, ನೆರೆಯ ಜಿಲ್ಲೆಗಳಾದ ಕಾಸರಗೊಡು ಹಾಗೂ ಕೊಡಗಿನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಗೋಳಿಯಡ್ಕ ಶಾಲೆಯ ಬಳಿಯಲ್ಲಿ ಕುಸಿದ ದನದ ಹಟ್ಟಿಯಲ್ಲಿ ಸಿಲುಕಿ ವೃದ್ಧರೋರ್ವರು ಮೃತಪಟ್ಟಿದ್ದಾರೆ. ಇದಲ್ಲದೆ ಕನಕಮಜಲು ಗ್ರಾಮದ ಮಳಿ ಕಾಲನಿಯಲ್ಲಿ ಮಯೊಂದು ಕುಸಿದಿದೆ. ಧಾರಾಕಾರ ಮಳೆಗೆ ಜೀವನದಿಗಳು ಮೈದುಂಬಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಬಹಳಷ್ಟು ಸೇತುವೆಗಳು ಮುಳುಗಡೆಯಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಗಡಿಭಾಗದಲ್ಲಿ ಜಡಿ ಮಳೆ
ಗಡಿಭಾಗದ ಕೇರಳ-ಕರ್ನಾಟಕವನ್ನು ಸಂಪರ್ಕಿಸುವ ಪಳ್ಳತ್ತೂರು ಸೇತುವೆ ಮುಳುಗಡೆಗೊಂಡಿರುವ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ನಡುವೆ ಸಂಚಾರ ಅಸ್ತವ್ಯಸ್ತಗೊಂಡಿದೆ.
ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಅಮ್ಚಿನಡ್ಕ ಎಂಬಲ್ಲಿ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದು ಇದರಿಂದು ಸುಮಾರು ಒಂದು ತಾಸು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಳೆಯಾರ್ಭಟ ಮುಂದುವರಿದಿದ್ದು, ಅಡಿಕೆ ಬೆಳೆಗಾರರಿಗೆ ಕೊಳೆರೋಗ ಭೀತಿ ಕಾಡುತ್ತಿದೆ.

LEAVE A REPLY