ಮಹಾರಾಷ್ಟ್ರದಲ್ಲಿ ಮತ್ತೊಂದು ರೈಲು ದುರಂತ: ಹಳಿತಪ್ಪಿದ ಡುರೊಂತೋ ಎಕ್ಸ್‌ಪ್ರೆಸ್

ಮುಂಬೈ: ನಾಗಪುರ-ಮುಂಬೈ ನಡುವೆ ಸಂಚರಿಸುವ ಡುರೊಂತೋ ಎಕ್ಸ್‌ಪ್ರೆಸ್ ರೈಲು ಕಲ್ಯಾಣ್ ಸಮೀಪ ತೀತ್ವಾಲಾ ಬಳಿ ಇಂದು ಬೆಳಗ್ಗೆ ಹಳಿತಪ್ಪಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಇದು ಮಹಾರಾಷ್ಟ್ರದಲ್ಲಿ ಒಂದು ವಾರದ ಅವಧಿಯಲ್ಲಿ ನಡೆದ ಎರಡನೇ ರೈಲು ಅವಘಡವಾಗಿದ್ದು, ಆ. 25ರಂದು ಮಹಿಮಾ ಬಳಿ ಅಂಧೇರಿ ಮತ್ತು ಛತ್ರಪತಿ ಶಿವಾಜಿ ಟರ್ಮಿನಲ್ ನಡುವಿನ ಲೋಕಲ್ ಟ್ರೈನ್‌ನ ನಾಲ್ಕು ಬೋಗಿಗಳು ಹಳಿ ತಪ್ಪಿದ್ದವು.
ಪ್ರಾಥಮಿಕ ವರದಿಗಳ ಪ್ರಕಾರ ಇಂಜಿನ್ ಸಹಿತ ಆರು ಬೋಗಿಗಳು ಹಳಿತಪ್ಪಿದ್ದು, ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಹಾಗೂ ರಕ್ಷಣಾ ತಂಡ ದೌಡಾಯಿಸಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

LEAVE A REPLY