ಲಕ್ಷಾಂತರ ಜನರ ಆಸೆ ಆಕಾಂಕ್ಷೆಗಳಿಗೆ ರೆಕ್ಕೆಪುಕ್ಕ ನೀಡಿದ ಜನಧನ ಯೋಜನೆಗೆ ಮೂರು ವರ್ಷ!

ಹೊಸದಿಲ್ಲಿ: ಜನಧನ ಯೋಜನೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳು, ಮುದ್ರಾ ಯೋಜನೆ ಮತ್ತು ಸ್ಟ್ಯಾಂಡ್ – ಆಪ್ಇಂಡಿಯಾ ಕಾರ್ಯಕ್ರಮ ಲಕ್ಷಾಂತರ ಜನರ ಆಸೆ ಆಕಾಂಕ್ಷೆಗಳಿಗೆ ರೆಕ್ಕೆಪುಕ್ಕವನ್ನು ನೀಡಿ ಉತ್ತೇಜಿಸಿವೆ ಎಂದು ಜನಧನ ಯೋಜನೆಗೆ ಸೋಮವಾರ ಮೂರು ವರ್ಷಗಳು ತುಂಬಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಡವರು ಮತ್ತು ನಿರ್ಲಕ್ಷಿತರ ಜೀವನದಲ್ಲಿ ಗುಣಾತ್ಮಕ ಮತ್ತು ಪರಿವರ್ತನೀಯ ಬದಲಾವಣೆಯನ್ನು ತರುವ ಸರಕಾರದಪ್ರಯತ್ನಗಳು ಅತ್ಯಂತ ಬಿರುಸಿನಿಂದ ಮುಂದುವರಿಯಲಿದೆ ಎಂದು ಅವರು ಭರವಸೆ ನೀಡಿದರು.
‘ಜನಧನ ಯೋಜನೆಗೆ ಇಂದು ಮೂರು ವರ್ಷಗಳು ತುಂಬಿದವು. ಈ ಉಪಕ್ರಮದಿಂದ ಪ್ರಯೋಜನ ಹೊಂದಿದಕೋಟ್ಯಂತರ ಜನರನ್ನು ಅದರಲ್ಲೂ ಮುಖ್ಯವಾಗಿ ಬಡವರನ್ನು ನಾನು ಅಭಿನಂದಿಸುತ್ತೇನೆ’ ಎಂದು ಮೋದಿ ಟ್ವೀಟ್ಮಾಡಿದ್ದಾರೆ.
‘ಜನಧನ ಕ್ರಾಂತಿಯ ಬಡವರು, ದೀನದಲಿತರು ಮತ್ತು ನಿರ್ಲಕ್ಷಿತರನ್ನು ಹಣಕಾಸಿನ ಮುಖ್ಯವಾಹಿನಿಗೆ ತರಲು ನಡೆಸಿದ ಒಂದು ಚಾರಿತ್ರಿಕ ಆಂದೋಲನ’ ಎಂದು ಅವರು ಹೇಳಿದ್ದಾರೆ.
‘ಜನಧನ ಯೋಜನೆ, ಸಾಮಾಜಿಕ ಭದ್ರತಾ ಯೋಜನೆಗಳು, ಮುದ್ರಾ ಮತ್ತು ಸ್ಟ್ಯಾಂಡ್-ಅಪ್ ಇಂಡಿಯಾದಂತಹಯೋಜನೆಗಳ ಮೂಲಕ ನಾವು ಲಕ್ಷಾಂತರ ಜನರ ಆಶೋತ್ತರಗಳಿಗೆ ಉತ್ತೇಜನ ನೀಡಿದ್ದೇವೆ’ ಎಂದು ಇನ್ನೊಂದುಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ.

LEAVE A REPLY