ಸೇನೆಯನ್ನು ಹಿಂದೆ ಕರೆಸಲು ಭಾರತ-ಚೀನಾ ಒಪ್ಪಂದ : ಡೋಕ್ಲಾಂ ಬಿಕ್ಕಟ್ಟು ಶಮನ

ಹೊಸದಿಲ್ಲಿ/ಬೀಜಿಂಗ್: ಡೋಕ್ಲಾಂನಲ್ಲಿಂದ ಸೈನಿಕರನ್ನು ತ್ವರಿತವಾಗಿ ಹಿಂದೆ ಕರೆಸಲು ಭಾರತ ಮತ್ತು ಚೀನಾ ಒಪ್ಪಿವೆ ಎಂದು ಭಾರತಸೋಮವಾರ ಹೇಳಿದೆ. ಚೀನಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಒಂದು ವಾರದ ಮೊದಲು ಈ ಬೆಳವಣಿಗೆಉಂಟಾಗಿದೆ. ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ನಿರೀಕ್ಷೆ ಇದೆ.
ಪ್ರಮುಖ ರಾಜತಾಂತ್ರಿಕ ಯಶಸ್ಸೊಂದರಲ್ಲಿ ಉಭಯ ದೇಶಗಳು ‘ರಾಜತಾಂತ್ರಿಕ ಸಂಪರ್ಕ’ವನ್ನು ಕಾಯ್ದುಕೊಂಡಿದ್ದುತಮ್ಮ ಅಭಿಪ್ರಾಯ ಕಳವಳ ಮತ್ತು ಹಿತಾಸಕ್ತಿಗಳನ್ನು ವ್ಯಕ್ತಪಡಿಸಲು ಶಕ್ತವಾಗಿವೆ ಎಂದು ವಿದೇಶಾಂಗ ವ್ಯವಹಾರಗಳಸಚಿವಾಲಯ ಹೇಳಿದೆ.
ಸಿಕ್ಕಿಂ ಸಮೀಪದ ಡೋಕ್ಲಾಂನಿಂದ ಯೋಧರನ್ನು ಹಿಂದೆ ಕರೆಸಿಕೊಳ್ಳಲು ಪ್ರಕ್ರಿಯೆ ನಡೆಯುತ್ತಿದೆ ಎಂದು ಭಾರತದಸೇನಾ ಮೂಲಗಳು ಹೇಳಿವೆ. ಭಾರತವು ಆ ಪ್ರದೇಶದಲ್ಲಿ ಸುಮಾರು ೩೫೦ ಸೇನಾ ಯೋಧರನ್ನು ನಿಯೋಜಿಸಿತ್ತು.
ವಿವಾದಿತ ಪ್ರದೇಶದಲ್ಲಿ ರಸ್ತೆಯೊಂದನ್ನು ನಿರ್ಮಿಸಲು ಮುಂದಾದ  ಚೀನಾದ ಸೇನೆಯನ್ನು ಜೂ. ೧೬ರಂದು ಭಾರತೀಯಯೋಧರು ತಡೆದಂದಿನಿಂದ ಡೋಕ್ಲಾಂನಲ್ಲಿ ಉಭಯ ದೇಶಗಳ ಯೋಧರ ನಡುವೆ ಬಿಕ್ಕಟ್ಟು ತಲೆ ದೋರಿತ್ತು.
‘ಡೋಕ್ಲಾಂ ಘಟನೆ ಸಂಬಂಧ ಇತ್ತೀಚಿನ ವಾರಗಳಲ್ಲಿ ಭಾರತ ಮತ್ತು ಚೀನಾ ರಾಜತಾಂತ್ರಿಕ ಸಂಪರ್ಕವನ್ನುಕಾಯ್ದುಕೊಂಡು ಬಂದಿದ್ದವು. ಈ ಸಂವಹನಗಳ ಅವಯಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ನಮ್ಮಕಳವಳ ಹಾಗೂ ಹಿತಾಸಕ್ತಿಗಳನ್ನು ಅರುಹಲು ನಾವು ಶಕ್ತರಾಗಿದ್ದೆವು. ಇದರ ಆಧಾರದಲ್ಲಿ ಡೋಕ್ಲಾಮ್‌ನ ಮುಖಾಮುಖಿಸ್ಥಳದಲ್ಲಿನ ಗಡಿಯೋಧರನ್ನು ತ್ವರಿತಗತಿಯಲ್ಲಿ ಹಿಂದೆ ಕರೆಸುವ ಬಗ್ಗೆ ಒಪ್ಪಿಕೊಳ್ಳಲಾಗಿತ್ತು ಮತ್ತು ಅದುಮುಂದುವರಿಯುತ್ತಿದೆ ಎಂದು ಭಾರತ ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತೀಯ ಯೋಧರು ಮತ್ತು ಸಾಧನ ಸಲಕರಣೆಗಳನ್ನು ಭಾರತದ ಕಡೆಗೆ ಮರಳಿಸಲಾಗಿದೆ.  ಚೀನಾದ ಸೈನಿಕರುಡೋಕ್ಲಾಂ ಪ್ರದೇಶದಲ್ಲಿ ಕಾವಲು ಮುಂದುವರಿಸಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾಹೇಳಿದ್ದಾರೆ.
ಬ್ರಿಕ್ಸ್ ಶೃಂಗಸಭೆಯು ಸೆ. ೩೦ರಿಂದ ೫ರ ತನಕ ಚೀನಾದ ಕ್ಸಿಯಾಮೆನ್ ನಗರದಲ್ಲಿ ನಡೆಯಲಿದೆ. ಯಾವುದೇಮಾತುಕತೆ ನಡೆಯಬೇಕಾದರೆ ಎರಡೂ ಕಡೆಯವರು ಮೊದಲು ತಮ್ಮ ಸೈನಿಕರನ್ನು ಹಿಂದೆ ಕರೆಸಿಕೊಳ್ಳಬೇಕು ಎಂದುವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇತ್ತೀಚೆಗೆ ಹೇಳೆದ್ದರಲ್ಲದೆ ಗಡಿ ಬಿಕ್ಕಟ್ಟಿನ ಶಾಂತಿಯುತಪರಿಹಾರಕ್ಕೆ ಒಲವು ವ್ಯಕ್ತಪಡಿಸಿದ್ದರು.

LEAVE A REPLY