ದತ್ತುಪುತ್ರಿ ಹನಿಪ್ರೀತ್‌ ಜತೆಗಿರಲು ರಾಮ್ ರಹೀಮ್ ಸಿಂಗ್ ಗೆ ಅನುಮತಿ ನಕಾರ

ಚಂಡೀಗಢ: ಜೈಲಿನಲ್ಲಿ ನನಗೆ ನೆರವಾಗಲು ದತ್ತು ಪುತ್ರಿ ಹನಿಪ್ರೀತ್‌ಗೆ ನನ್ನೊಂದಿಗೆ ಇರಲು ಅನುಮತಿ ನೀಡಬೇಕುಎಂದು ರಾಮ್ ರಹೀಮ್ ಸಿಂಗ್ ಮಾಡಿಕೊಂಡಿದ್ದ  ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಹನಿಪ್ರೀತ್ ಕೂಡ ತನ್ನ ವಕೀಲರ ಮೂಲಕ ನನಗೆ ನನ್ನ ತಂದೆಯೊಂದಿಗೆ ಜೈಲಿನಲ್ಲಿರಲು ಅನುಮತಿ ನೀಡಬೇಕು ಎಂದುಕೋರಿ ಮನವಿ ಸಲ್ಲಿಸಿದ್ದಳು. ಆ ಮನವಿಯನ್ನು ಕೂಡ ಕೋರ್ಟ್ ತಿರಸ್ಕರಿಸಿದೆ. 2009 ರಲ್ಲಿ ಡೇರಾ ಮುಖ್ಯಸ್ಥಹನಿಪ್ರೀತ್‌ಳನ್ನು ದತ್ತು ಸ್ವೀಕರಿಸಿದ್ದ .
ಈ ರೀತಿಯ ಮನವಿಯನ್ನು ನ್ಯಾಯಾಲಯ ಪುರಸ್ಕರಿಸುವಂತಿಲ್ಲ, ಸರಕಾರ ಅಥವಾ ಬಂಖಾನೆ ಆಡಳಿತೆಯು ಈ ಬಗ್ಗೆನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಕೋರ್ಟ್ ಹೇಳಿತು.
ಜೈಲಿಗೆ ಸಪ್ತ ಸುತ್ತಿನ ಭದ್ರತೆ
ಡೇರಾ ಸಚ್ಚಾ ಸೌದದ ಅನುಯಾಯಿಗಳಿಂದ ಸಂಭವನೀಯ ಹಿಂಸಾಚಾರ ತಡೆಯಲು ಬಾಬಾ ಬಂಯಾಗಿರುವ ಹಾಗೂಶಿಕ್ಷೆ ಪ್ರಮಾಣ ಪ್ರಕಟವಾದ ರೊಹ್ಟಕ್‌ನ ಹೊರವಲಯದಲ್ಲಿರುವ ಸುನಾರಿಯಾ ಜೈಲಿಗೆ ಏಳು ಸುತ್ತಿನ ಭದ್ರತೆಕಲ್ಪಿಸಲಾಗಿತ್ತು.
ಅರೆ ಸೇನಾ ಪಡೆಯ 23 ಪಡೆಗಳು, ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಮಾತ್ರವಲ್ಲದೇ ಜೈಲಿಗೆ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಹೆಚ್ಚುವರಿ ಭದ್ರತೆಗಾಗಿ ಸೇನೆಯನ್ನುನಿಯೋಜಿಸಲಾಗಿತ್ತು.

LEAVE A REPLY