ತೀವ್ರವಾದಿ ಪಿಎಫ್‌ಐ ಕೇರಳ ‘ಲವ್ ಜೆಹಾದ್’ ಕೃತ್ಯಗಳ ಹಿಂದಿರುವ ಶಕ್ತಿ: ಎನ್‌ಐಎ

ಹೊಸದಿಲ್ಲಿ : ಕೇರಳದಲ್ಲಿ ನಡೆಯುತ್ತಿರುವ ‘ಲವ್ ಜೆಹಾದ್’ಕೃತ್ಯಗಳ  ಹಿಂದಿನ ಸಂಚಿನ ಬಗ್ಗೆ ಸುಪ್ರೀಂ ಕೋರ್ಟ್ ಸೂಚನೆಯಂತೆತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಈ ಕೃತ್ಯಗಳ ಹಿಂದಿರುವ ಶಕ್ತಿಯನ್ನು ಬೊಟ್ಟುಮಾಡಿದ್ದು, ಇದರ ಹಿಂದೆ ಮುಸ್ಲಿಂ ಮತಾಂಧ ತೀವ್ರವಾದಿ ಸಂಘಟನೆ ಪಾಪ್ಯುಲರ್‌ಫ್ರಂಟ್ (ಪಿಎಫ್‌ಐ)ನ ಕೈವಾಡಇರುವುದನ್ನು ಎತ್ತಿ ತೋರಿದೆ.
ಕೇರಳ ಪೊಲೀಸರು ಅಖಿಲಾ ಅಶೋಕನ್ ಅಲಿಯಾಸ್ ಹದಿಯಾ ಪ್ರಕರಣದ ಬಗ್ಗೆ  ನಡೆಸಿದ ತನಿಖೆ ಹಾಗೂಪಾಲಕ್ಕಾಡ್‌ನ ಅತಿರಾ ನಂಬಿಯಾರ್ ಎಂಬಾಕೆಯ ಬಲವಂತದ ಮತಾಂತರ ಪ್ರಕರಣ ಕುರಿತು ತಾನೇ ಕಲೆಹಾಕಿದಮಾಹಿತಿ ಆಧರಿಸಿ ಎನ್‌ಐಎ ಪ್ರಾಥಮಿಕ ವರದಿ ಸಿದ್ಧಪಡಿಸಿದೆ.
ಆಮಿಷಗಳು ಹಾಗೂ ಮೂಲಭೂತವಾದಿ ಬೋಧನೆಗಳ ಮೂಲಕ ಹಿಂದೂ ಹುಡುಗಿಯರ ತಲೆ ಕೆಡಿಸಿ ಮದುವೆ ಹಾಗೂಮತಾಂತರ ನಡೆಸುತ್ತಿರುವ ಕೃತ್ಯಗಳ ಹಿಂದಿರುವುದೇನು ಎಂಬ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ಎನ್‌ಐಎಗೆ ನಿರ್ದೇಶಿಸಿತ್ತು.
ಈ ಎರಡೂ ಪ್ರಕರಣಗಳಲ್ಲಿ ಒಂದೇ ವ್ಯಕ್ತಿಯ ಮೇಲೆ ಆರೋಪ ಕೇಳಿ ಬಂದಿದೆ. ಅಖಿಲಾಳ ‘ಮಾರ್ಗದರ್ಶಕಿ’ಸೈನಾಬಾಳೇ ಅತಿರಾಗೂ ಇಸ್ಲಾಂಗೆ ಮತಾಂತರವಾಗುವಂತೆ ಆಮಿಷವೊಡ್ಡಿದವಳು. ಇದಕ್ಕೆ ಪಿಎಫ್‌ಐ, ಎಸ್‌ಡಿಪಿಐಮತ್ತು ಮರ್ಕಝುಲ್ ಹಿದಾಯ ’ಸತ್ಯಾಸರನಿ’ ಮುಂತಾದ ಮತೀಯ ಸಂಘಟನೆಗಳ ಕಾರ್ಯಕರ್ತರ ಸಕ್ರಿಯ ಸಹಕಾರಲಭಿಸಿದೆ. ಎರಡೂ ಪ್ರಕರಣಗಳಲ್ಲಿ ಸೈನಾಬಾಳ ಕೆಲವು ಸಹವರ್ತಿಗಳು ಶಾಮೀಲಾಗಿರುವುದು ಕಂಡು ಬಂದಿದೆ ಎಂದುಎನ್‌ಐಎ ಹೇಳಿದೆ.
ಶಫಿನ್ ಜಹಾನ್ ಜತೆ ಅಖಿಲಾಳ ಮದುವೆಯನ್ನು ಕೇರಳ ಹೈಕೋರ್ಟ್ ರದ್ದುಪಡಿಸಿದ ಬಳಿಕ ‘ಲವ್ ಜೆಹಾದ್’ ಆರೋಪಿಶಫಿನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಕುರಿತು ಮತ್ತಷ್ಟು ತನಿಖೆ ನಡೆಸುವಂತೆನ್ಯಾಯಾಲಯ ಎನ್‌ಐಎಗೆ ಸೂಚಿಸಿತ್ತು.
ದುರ್ಬಲ ಮನಸಿನವರು ಟಾರ್ಗೆಟ್
ಕೌಟುಂಬಿಕ ಸಮಸ್ಯೆಗಳಿಂದಾಗಿ ಭಾವನಾತ್ಮಕವಾಗಿ ದುರ್ಬಲವಾಗಿರುವ ಹಿಂದೂ ಯುವತಿಯರನ್ನೇ ಗುರುತಿಸಿಪಿಎಫ್‌ಐ ಕಾರ್ಯಕರ್ತರು ಅವರನ್ನು ಮತಾಂತರಗೊಳ್ಳುವಂತೆ ಪ್ರಚೋದಿಸುತ್ತಿದ್ದರು .ಇಂತಹುದೇ ಸಂಚಿನ ಬಲೆಗೆಬಿದ್ದಿದ್ದ ಅಖಿಲಾ ೨೦೧೬ರ ಜನವರಿಯಲ್ಲಿ ತನ್ನ ತಂದೆ ಹಾಗೂ ಕೇರಳ ಪೊಲೀಸ್‌ನ ಹಿರಿಯ ಅಕಾರಿಗಳಿಗೆ ನಾಲ್ಕುಪ್ರತ್ಯೇಕ ಪತ್ರಗಳನ್ನು ಬರೆದು, ತಾನು ಸ್ವಂತ ಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಹೇಳಿದ್ದಳು. ಆದರೆ,ಪ್ರತಿಯೊಂದು ಪತ್ರದಲ್ಲೂ ಆಕೆಯ ಹೆಸರನ್ನು ತಪ್ಪಾಗಿ ಬರೆದಿರುವುದು ಕಂಡು ಬಂದಿದ್ದು, ಇದರಿಂದ ಈ ಬಗ್ಗೆ ಆಕೆಯಹೆತ್ತವರು ಅನುಮಾನ ವ್ಯಕ್ತಪಡಿಸಿದ್ದರು. ಆಕೆಯ ಪರವಾಗಿ ಬೇರೆ ಯಾರೋ ಪತ್ರ ಬರೆದು ಆಕೆಯಿಂದ ಸಹಿ ಮಾತ್ರಹಾಕಿಸಿಕೊಂಡಿರಬೇಕು ಎಂದು  ಎನ್‌ಐಎ ಅಕಾರಿಗಳೂ ಈಗ ತೀವ್ರ ಶಂಕೆ ವ್ಯಕ್ತಪಡಿಸಿದ್ದಾರೆ. ಅತಿರಾ ಪ್ರಕರಣ ಕೂಡಾಇದೇ ರೀತಿಯಾಗಿ ನಡೆದಿದೆ. ಆದರೆ, ಅಖಿಲಾ ಸ್ವಂತ ಇಚ್ಛೆಯಂತೆ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ ಎಂದು ಪಿಎಫ್‌ಐ ಹೇಳಿಕೊಳ್ಳುತ್ತಿದೆ.ಆದಾಗ್ಯೂ ಅಖಿಲಾ ತನ್ನ ಕಾಲೇಜು ಸ್ನೇಹಿತೆಯರ ಮೂಲಕ ಇಸ್ಲಾಂ ಬಗ್ಗೆ ಆಕರ್ಷಿತಳಾಗಿದ್ದಳು. ಸೈನಾಬಾ ಆಕೆಯಮತಾಂತರಕ್ಕೆ ಅಗತ್ಯ ಸಹಾಯ ಮಾತ್ರ ಮಾಡಿರುವುದನ್ನು ಅದು ಒಪ್ಪಿಕೊಂಡಿದೆ. ಶಫಿನ್ ಜತೆ ಮದುವೆಗೆ ಮುನ್ನಅಖಿಲಾ, ಪಿಎಫ್‌ಐನ ಮಹಿಳಾ ಘಟಕವಾದ ನ್ಯಾಷನಲ್ ವಿಮೆನ್ಸ್ ಫ್ರಂಟ್‌ನ ಅಧ್ಯಕ್ಷೆ ಸೈನಬಾ ಜತೆ ವಾಸ್ತವ್ಯಹೂಡಿದ್ದಳು. ‘ಸತ್ಯಾಸರನಿ’ ಎಂಬ ಸಂಘಟನೆಯ ಪ್ರಮುಖರು ಆಕೆಯ ಹೆತ್ತವರು ಮತ್ತು ನ್ಯಾಯಾಲಯಕ್ಕೆ ಮಾಹಿತಿನೀಡದೆಯೇ ಈಕೆಯ ಮದುವೆಗೆ ವ್ಯವಸ್ಥೆ ಮಾಡಿದ್ದರು.
ಅಲ್ಲದೆ ಪಿಎಫ್‌ಐ-ಎಸ್‌ಡಿಪಿಐ ಕಾರ್ಯಕರ್ತ ಮೊಹಮ್ಮದ್ ಕುಟ್ಟಿ ಎಂಬಾತನೂ ಇದರಲ್ಲಿ ಶಾಮೀಲಾಗಿದ್ದು, ಈತಅಖಿಲಾಳ ಸ್ನೇಹಿತೆಯ ತಂದೆ ಅಬೂಬಕರ್, ಸೈನಬಾ ಮತ್ತು ಆಲಿಯರ್ ನೆರವಿನೊಂದಿಗೆ ಅಖಿಲಾಳನ್ನು ಇಸ್ಲಾಮಿಕ್ಅಧ್ಯಯನಕ್ಕೆ ಸೇರಿಸಿದ್ದ. ಗಮನಾರ್ಹ ಸಂಗತಿ ಎಂದರೆ ಕುಟ್ಟಿ ಮತ್ತು ಸೈನಬಾ ಅತಿರಾ ಪ್ರಕರಣದಲ್ಲೂ ಸಹಪ್ರಾಯೋಜಕರಾಗಿದ್ದರು ! ಅನಂತರ ಅತಿರಾಳನ್ನು ಅಕ್ರಮವಾಗಿ ಇರಿಸಿದ್ದಕ್ಕಾಗಿ ಮೊಹಮ್ಮದ್ ಕುಟ್ಟಿಯನ್ನು ಪೊಲೀಸರುಬಂಸಿದ್ದರು. ಶಫಿನ್‌ನ ಕ್ರಿಮಿನಲ್ ಹಿನ್ನೆಲೆಯನ್ನೂ ಬಯಲಿಗೆಳೆದಿರುವ ಎನ್‌ಐಎ , ಈತನ ವಿರುದ್ಧ ನಾಲ್ಕು ಕ್ರಿಮಿನಲ್ ಕೇಸುಗಳುದಾಖಲಾಗಿದ್ದು, ಈತ ಎಸ್‌ಡಿಪಿಐ ಜತೆಗೂ ನಂಟು ಹೊಂದಿರುವುದನ್ನು ಬೊಟ್ಟು ಮಾಡಿದೆ. ಇಸ್ಲಾಮಿಕ್ ಸ್ಟೇಟ್‌ನ ಅಲ್-ಹಿಂದಿ ಘಟಕದ ಕುರಿತು ಎನ್‌ಐಎ ನಡೆಸಿದ ತನಿಖೆಯ ಆರೋಪ ಪಟ್ಟಿಯಲ್ಲಿ ಹೆಸರಿಸಲಾದ ಮನ್ಸೀದ್ ಮುಹಮ್ಮದ್ಜತೆಗೂ ಶಫಿನ್ ಸಂಪರ್ಕ ಹೊಂದಿರುವುದು ಕೂಡಾ ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

LEAVE A REPLY