ಕೊಡಗಿನಲ್ಲಿ ಮುಂಗಾರು ಚುರುಕು: ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಬ್ಬಿ ಜಲಪಾತ ಮೈದುಂಬಿಕೊಂಡಿದೆ.

ಮಡಿಕೇರಿ: ಜಿಲ್ಲೆಯಲ್ಲಿ ಮುಂಗಾರು ಚುರಕುಗೊಂಡಿದ್ದು, ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲ್ಲಿ ಜಿಲ್ಲೆಯಲ್ಲಿ ಸರಾಸರಿ 35.95 ಮಿ.ಮೀ. ಮಳೆಯಾಗಿದೆ. ಅದರಲ್ಲೂ ಮಡಿಕೇರಿ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅಧಿಕ ಮಳೆಯಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ 64 ಮಿ.ಮೀ ಮಳೆ ದಾಖಲಾಗಿದೆ.
ಜಿಲ್ಲೆಯ ವಿವಿಧೆಡೆಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರು ಆದೇಶ ಹೊರಡಿಸಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ 57.45 ಮಿ.ಮೀ., ವೀರಾಜಪೇಟೆ ತಾಲೂಕಿನಲ್ಲಿ 25.33 ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 25.07 ಮಿ.ಮೀ ಮಳೆಯಾಗಿದ್ದು, ಹೋಬಳಿವಾರು ಮಳೆ ವಿವರದನ್ವಯ ಮಡಿಕೇರಿ ಕಸಬಾ 64, ನಾಪೋಕ್ಲು 40, ಸಂಪಾಜೆ 62, ಭಾಗಮಂಡಲ 63.8, ವೀರಾಜಪೇಟೆ ಕಸಬಾ 24.6, ಹುದಿಕೇರಿ 27, ಶ್ರೀಮಂಗಲ 40.4, ಪೊನ್ನಂಪೇಟೆ 18, ಅಮ್ಮತ್ತಿ 30, ಬಾಳೆಲೆ 12, ಸೋಮವಾರಪೇಟೆ ಕಸಬಾ 24.2, ಶನಿವಾರಸಂತೆ 17, ಶಾಂತಳ್ಳಿ 52, ಕೊಡ್ಲಿಪೇಟೆ 10, ಕುಶಾಲನಗರ 12.2, ಸುಂಟಿಕೊಪ್ಪ 35 ಮಿ.ಮೀ. ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ 
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಸೋಮವಾರ ಜಲಾಶಯದಲ್ಲಿ ನೀರಿನ ಮಟ್ಟವನ್ನು 2858.40 ಅಡಿಗಳಿಗೆ ಕಾಯ್ದಿರಿಸಿಕೊಂಡು ನದಿಗೆ ೭೦೦೦ ಹಾಗೂ ನಾಲೆಗೆ 1,000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

LEAVE A REPLY