ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತಾಗಿ ಸಿಎಂ ಮಕ್ಕಳಂತೆ ವರ್ತಿಸುತ್ತಾರೆ

ಕೊಪ್ಪಳ: ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತಾಗಿ ಸಿಎಂ ಮಕ್ಕಳಂತೆ  ವರ್ತಿಸಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಎಚ್‌ .ವಿಶ್ವನಾಥ ಟೀಕೆ ಮಾಡಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮಕ್ಕಳ ಬುದ್ದಿಯವರು. ಗಂಭೀರತೆಯೇ ಇಲ್ಲ. ನಾನು ಭ್ರಷ್ಟಾಚಾರ ಮಾಡಿಲ್ಲ ಎನ್ನುವ ಅವರು ಇಡೀ ರಾಜ್ಯದ ವಿವಿಧ  ಇಲಾಖೆಗಳಲ್ಲಿ ಭ್ರಷ್ಟಾಚಾರ ಕಾಣಿಸುತ್ತಿದೆ. ಕೊಪ್ಪಳ ಸಣ್ಣ ನೀರಾವರಿ ಇಲಾಖೆಯಲ್ಲಿ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. ಇಡೀ ಉತ್ತರ ಕರ್ನಾಟಕವನ್ನು ಸರಕಾರ ಕಡೆಗಣಿಸಿದೆ, ಅಪೌಷ್ಠಿಕತೆಯಲ್ಲಿ ಕೊಪ್ಪಳ ದೇಶದಲ್ಲೇ ಮೊಲದ ಸ್ಥಾನದಲ್ಲಿದೆ, ವೈಧ್ಯರ ಕೊರತೆಯಿಂದ ಮಕ್ಕಳು ಸಾಯುತ್ತಿವೆ ಇದೆಲ್ಲಾ ಮುಖ್ಯಮಂತ್ರಿ ಗಳು ಹಾಗೂ ಆರೋಗ್ಯ ಸಚಿವರಿಗೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದರು. ಸಿವೋಟರ್ ಸಮೀಕ್ಷೆ ರಾಜ್ಯ ಸರ್ಕಾರದ ಪ್ರಾಯೋಜಿತವಾದ್ದು ಇದಕ್ಕೆ ಮಹತ್ವ ಬೇಡ, ಅದು ವಾಸ್ತವವೂ ಅಲ್ಲ ಎಂದರು.

 

 

 

LEAVE A REPLY