ಮನೆ ಛಾವಣಿ ಕುಸಿದು ಮಗು ಸೇರಿ ಮೂವರ ದುರ್ಮರಣ

ವಿಜಯಪುರ : ವಿಜಯಪುರ ನಗರದ ಮಠಪತಿ ಗಲ್ಲಿಯಲ್ಲಿ ಮನೆ ಛಾವಣಿ ಕುಸಿದು ಮಗು ಸೇರಿ ಮೂವರು ದುರ್ಮರಣ ಹೊಂದಿದ ಘಟನೆ ಸೋಮವಾರ ನಡೆದಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ನೆನೆದಿದ್ದ ಮನೆಯ ಮೇಲ್ಛಾವಣಿ ಕುಸಿದು ಈ ದುರ್ಘಟನೆ ನಡೆದಿದೆ. ಈ ಸಂದರ್ಭ  ಮನೆಯಲ್ಲಿದ್ದ ದಂಪತಿ ಹಾಗೂ ಮಗು ಸಾವನ್ನಪ್ಪಿದೆ.  ಅಶೋಕ ಗೌಡೆಕರ (40),
ಶಶಿಕಲಾ ಗೌಡೆಕರ (30), ಚಂದ್ರಶೇಖರ ಗೌಡೆಕರ (04) ಮೃತಪಟ್ಟವರು.

 

LEAVE A REPLY