ಡೇರಾ ಸಚ್ಚಾ ಸೌಧ ಮುಖ್ಯಸ್ಥ ಅತ್ಯಾಚಾರಿ ರಾಮ್ ರಹೀಮ್‌ಗೆ ಇನ್ನು 10 ವರ್ಷ ಜೈಲೂಟ

ಚಂಢೀಗಡ: ಡೇರಾ ಸಚ್ಚಾ ಸೌಧ ಮುಖ್ಯಸ್ಥ ಬಾಬಾ ಗುರ್‍ಮೀತ್ ರಾಮ್‌ರಹೀಂ ಸಿಂಗ್‌ಗೆ ಸಿಬಿಐ ವಿಶೇಷ ನ್ಯಾಯಾಲಯ ಇಂದು 10 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹದಿನೈದು ವರ್ಷ ಹಿಂದಿನ ಈ ಪ್ರಕರಣದಲ್ಲಿ ರಾಮ್‌ರಹೀಂ ಸಿಂಗ್ ಅಪರಾಧಿ ಎಂದು ಈಗಗಲೇ ನ್ಯಾಯಾಲಯ ತೀರ್ಪು ನೀಡಿದ್ದು, ಇಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ರೋಹ್ಟಕ್ ಜಿಲ್ಲಾ ಜೈಲಿಗೆ ಆಗಮಿಸಿ ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳು ಎಂದು ಘೋಷಣೆ ಮಾಡಿದ್ದಾರೆ.
ಶಿಕ್ಷೆ ಪ್ರಮಾಣ ಪ್ರಕಟಗೊಳ್ಳುತ್ತಿದ್ದಂತೆಯೇ ಹರಿಯಾಣದ ಸೀರ್ಸಾ ಮತ್ತು ಪುಲ್ಯಾದಲ್ಲಿ ಬಾಬಾನ ಭಕ್ತರು ಮತ್ತೆ ಹಿಂಸಾಚಾರ ಮುಂದುವರಿಸಿದ್ದು, ವಾಹನಗಳಿಗೆ ಬೆಂಕಿಯಿಕ್ಕೆ ದಾಂಧಲೆ ನಡೆಸಿದ್ದಾರೆ.
ಪ್ರಕರಣ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಸೋಮವಾರ ಹರಿಯಾಣ, ದೆಹಲಿ, ಪಂಜಾಬ್ ಸೇರಿದಂತೆ ಹಲವೆಡೆ ಬಾಬಾ ಅನುಯಾಯಿಗಳು ಹಿಂಸಾಚಾರವಾಗದಂತೆ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ರೋಹ್ಟಗಿ ಜೈಲಿನ ಸಮೀಪ ಬಾಬಾ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಅಲ್ಲದೆ, ಹರಿಯಾಣದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹೆಚ್ಚವರಿ ಭದ್ರತೆಗಾಗಿ ಸೇನೆಯನ್ನೂ ನಿಯೋಜಿಸಲಾಗಿತ್ತು. ತೀರ್ಪು ಪ್ರಕಟವಾಗುವ ಸ್ಥಳಕ್ಕೆ ಕೇವಲ 7 ಮಂದಿಗೆ ಮಾತ್ರವೇ ಅವಕಾಶ ನೀಡಲಾಗಿತ್ತು.

LEAVE A REPLY