2024ರಿಂದ ಲೋಕಸಭೆ ಹಾಗೂ ವಿಧಾನಸಭೆ ಒಟ್ಟಾಗಿ ಚುನಾವಣೆ: ನೀತಿ ಆಯೋಗವು ಒಲವು

ಹೊಸದಿಲ್ಲಿ:ಲೋಕಸಭೆ ಹಾಗೂ ವಿಧಾನ ಸಭಾ ಚುನಾವಣೆಯನ್ನು 2024ರಿಂದ ಒಂದೇ ಬಾರಿಗೆ ನಡೆಸಲು ನೀತಿ ಆಯೋಗವು ಒಲವು ತೋರಿಸಿದೆ.
ದೇಶದ ಹಿತಾಸಕ್ತಿಯನ್ನು ಕಪಾಡುವ ಉದ್ದೇಶದಿಂದ 2 ಚುನಾವಣೆಯನ್ನೂ ಒಂದೇ ಬಾರಿಗೆ ನಡೆಸುವುದು ಸೂಕ್ತ ಎಂದು ಹೇಳಿದೆ.
ದೇಶದಲ್ಲಿ ಎಲ್ಲಾ ಚುನಾವಣೆಗಳನ್ನು ಕೂಡ ಉಚಿತ ಹಾಗೂ ನ್ಯಾಯಯುತ ನೀತಿಯಲ್ಲಿ ನಡೆಯಬೇಕಾಗುತ್ತದೆ. ಆದರೆ, ಕನಿಷ್ಠ ಪ್ರಚಾರ ಕಾರ್ಯವಾದರೂ ಕೂಡ ಏಕ ರೀತಿಯಲ್ಲಿ ನಡೆಯಬಹುದಾಗಿದೆ ಎಂದು ಸರ್ಕಾರದ ಚಿಂತಕರು ತಮ್ಮ ವರದಿಯಲ್ಲಿ ತಿಳಿಸುತ್ತಾರೆ. ಎರಡೂ ಚುನಾವಣೆಗಳನ್ನು ೨೦೨೪ರಿಂದ ಏಕಕಾಲದಲ್ಲಿ ನಡೆಸುವ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯನಿರ್ವಹಿಸುತ್ತೇವೆ. ಈ ಯೋಜನೆಯೆಡೆಗೆ ಗಮನ ಹರಿಸಲು ದೇಶದ ಹಿತಾಸಕ್ತಿ ಕಾಪಾಡುವುದೇ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ರಾಷ್ಟ್ರೀಯ ಹಿತಾಸಕ್ತಿಯನ್ನು ಕಾರ್ಯಗತಗೊಳಿಸಲು ಸಾಂವಿಧಾನಿಕ ಮತ್ತು ವಿಚಾರಧಾರೆಗಳನ್ನು ಹೊಂದಿದ ಮಧ್ಯಸ್ಥಗಾರರ ಗುಂಪು, ತಜ್ಞರು, ಚಿಂತಕರು, ಸರ್ಕಾರಿ ಅಕಾರಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಗಳನ್ನು ಒಳಗೊಂಡತ ಗುಂಪು ಸೂಕ್ತ ಅನುಷ್ಠಾನ ಕೈಗೊಳ್ಳಲು ನಿರ್ಮಾಣವಾಗಬೇಕು ಎಂದು ಹೇಳಲಾಗಿದೆ.
ಇದರ ಕರಡು ಸೂಕ್ತ ರೀತಿಯಾದ ಸಾಂವಿಧಾನಿಕ ಮತ್ತು ಶಾಸನಬದ್ಧವಾದ ತಿದ್ದುಪಡಿಗಳನ್ನು, ಕಾರ್ಯಸಾಧ್ಯವಾದ ಚೌಕಟ್ಟುಗಳನ್ನು ಒಪ್ಪಿಕೊಂಡು ಏಕಕಾಲಕ್ಕೆ ಚುನಾವಣೆ ನಡೆಸಲು ಅನುಕೂಲವಾಗುವಂತೆ ನೀತಿ ಆಯೋಗವು ೨೦೧೭-೧೮ ರಿಂದ ೨೦೧೯-೨೦ರವರೆಗಿನ ತನ್ನ ಮೂರು ವರ್ಷಗಳ ಆಕ್ಷನ್ ಅಜೆಂಡಾದಲ್ಲಿ ತಿಳಿಸಿದೆ. ಈ ಸಂಬಂಧ ಚುನಾವಣಾ ಆಯೋಗವು ನೋಡೆಲ್ ಏಜೆನ್ಸಿ ಮೂಲಕ ಟೈಮ್‌ಲೈನ್ ಒಂದನ್ನು ೨೦೧೮ರ ಮಾರ್ಚ್‌ನಿಂದ ಸಿದ್ಧಮಾಡಲಿದೆ. ಈ ಕಾರ್ಯಯೋಜನೆಯನ್ನು ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮುಂದೆ ನೀತಿ ಆಯೋಗವು ಇರಿಸಿತ್ತು. ಈ ವರ್ಷದ ಗಣರಾಜ್ಯೋತ್ಸವದಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಸಮ್ಮತಿ ಇರುವುದಾಗಿಯೂ ಕೂಡ ಹೇಳಿದ್ದರು.
ಟ್ರಾಫಿಕ್ ಸಮಸ್ಯೆ ನಿರ್ವಹಣೆಗೆ ವಿಶೇಷ ಕೋರ್ಟ್
ಕೆಳಹಂತದ ಕೋರ್ಟ್‌ಗಳಲ್ಲಿ ಅತ್ಯಕ ಸಂಖ್ಯೆಯ ಟ್ರಾಫಿಕ್‌ಗೆ ಸಂಬಂಸಿದ ಪ್ರಕರಣದಗಳು ದಾಖಲಾಗುತ್ತದೆ. ಆದ್ದರಿಂದ ನೀತಿ ಆಯೋಗವು ಇದಕ್ಕೆ ಯೋಜನೆಯೊಂದನ್ನು ರೂಪಿಸಿ ವಿಶೇಷ ಕೋರ್ಟ್ ರಚನೆ ಮಾಡಲು ಚಿಂತನೆ ನಡೆಸಿದೆ. ಸಮಸ್ಯೆಗಳನ್ನು ಶೀಘ್ರ ನಿರ್ವಹಣೆ ಮಾಡುವ ಸಲುವಾಗಿ ಈ ಕ್ರಮ ಅನುಕೂಲಕರವಾಗಲಿದೆ ಎಂದು ಹೇಳಿದೆ. ಈ ಬಗ್ಗೆ ೨೦೧೪ರ ಜುಲೈನಲ್ಲಿಯೇ ಕಾನೂನು ಪದವಿಧರರನ್ನು ವಿಶೇಷ ಟ್ರಾಫಿಕ್ ಕೋರ್ಟ್‌ಗಳಿಗೆ ನೇಮಕ ಮಾಡಿಕೊಳ್ಳಲು ಕಾನೂನು ಆಯೋಗವು ಸೂಚಿಸಿತ್ತು.
ಕಸದಿಂದ ಇಂಧನ
ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗಿರುವಂತ ಕಸದ ನಿರ್ವಹಣೆಗೆ ವೇಸ್ಟ್ ಟು ಎನರ್ಜಿ ಪ್ಲಾಂಟ್‌ಗಳನ್ನು ನಿರ್ಮಾಣ ಮಾಡಲು ನೀತಿ ಆಯೋಗವು ಸೂಚಿಸಿದೆ. ಇದರಿಂದ ಇಂಧನಗಳನ್ನು ಉತ್ಪಾದನೆ ಮಾಡಬಹುದಾಗಿದ್ದು, ಕಸದ ಸಮಸ್ಯೆಯನ್ನು ನಿವಾರಣೆ ಮಾಡಿದಂತಾಗುತ್ತದೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದನ್ನು ಈ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ. ನಗರ ಪ್ರದೇಶದಗಳಲ್ಲಿ ಅತ್ಯಕ ಪ್ರಮಾಣದಲ್ಲಿ ಘನತ್ಯಾಜ್ಯವು ಉತ್ಪತ್ತಿಯಾಗುತ್ತದೆ. ಇದರಿಂದ ನಗರಗಳು ಕಸ ಸಮಸ್ಯೆಯಿಂದ ಮುಕ್ತಿ ಹೊಂದಿ ಅಭಿವೃದ್ಧಿಯನ್ನು ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದೆ.

LEAVE A REPLY