ರಾಮ್ ರಹೀಂ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಆತನ ರಕ್ಷಣಾ ಸಿಬ್ಬಂದಿಯಿಂದಲೇ ಸ್ಕೆಚ್ ?

file photo

ಚಂಡೀಗಢ: ಪಂಜಾಬ್ ಹಾಗೂ ಹರ್ಯಾಣದಲ್ಲಿ ಸಂಭವಿಸಿರುವ ಕೋಟ್ಯಾಂತರ ರೂಪಾಯಿ ನಷ್ಟವನ್ನು ತುಂಬಲು ಡೇರಾ ಸಚ್ಚಾ ಸೌಧಕ್ಕೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಇನ್ನೊಂದೆಡೆ, ತೀರ್ಪು ಹೊರಬಿದ್ದ ಕೂಡಲೇ ರಾಮ್ ರಹೀಂ ತಪ್ಪಿಸಿಕೊಳ್ಳಲು ಅನುಕೂಲವಾಗುವಂತೆ ಆತನ ರಕ್ಷಣಾ ಸಿಬ್ಬಂದಿಯೇ ಸ್ಕೆಚ್ ಹಾಕಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ!
ಈ ಸಂಬಂಧ ಆತನ 7 ರಕ್ಷಣಾ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂತರೆಲ್ಲರೂ ಗುರ್ಮೀತ್‌ಗೆ ಜಡ್ ಪ್ಲಸ್ ಭದ್ರತೆಯನ್ನು ನೀಡುತ್ತಿದ್ದ ಸಿಬ್ಬಂದಿಯಾಗಿದ್ದಾರೆ. ಇದಲ್ಲದೆ, ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟವಾಗುವ ಹಿನ್ನಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಡೇರಾ ಸಚ್ಚಾ ಸೌಧಕ್ಕೆ ಸೇರಿದ ಸಂಪೂರ್ಣ ಆಸ್ತಿಯನ್ನು ಸಿರ್ಸಾ ಡೆಪ್ಯುಟಿ ಕಮಿಷನರ್ ಪ್ರಭಾಜೋತ್ ಸಿಂಗ್ ವಶಕ್ಕೆ ಪಡೆದುಕೊಳ್ಳಲು ಆದೇಶ ನೀಡಿದ್ದಾರೆ. ಶುಕ್ರವಾರ ಪಂಜಾಬ್ ಹಾಗೂ ಹರ್ಯಾಣ ಕೋರ್ಟ್ ಆಸ್ತಿ ವಶಕ್ಕೆ ಆದೇಶ ನೀಡಿತ್ತು. ಗುರ್ಮೀತ್ ವಿರುದ್ಧ ಪ್ರಕರಣದ ತೀರ್ಪು ಪ್ರಕಟವಾಗುವ ವೇಳೆ ಅವರ ಅನುಯಾಯಿಗಳು ಸಾವಿರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿ ಕೋಟ್ಯಂತರ ಮೌಲ್ಯದ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದ್ದರು. ಇದರಿಂದಾದ ನಷ್ಟವನ್ನು ತುಂಬಲು ಕೋರ್ಟ್ ಈ ಆದೇಶ ನೀಡಿತ್ತು.
ರೋಹ್ಟಕ್‌ನಲ್ಲಿ ಬಹುಹಂತದ ಭದ್ರತೆ
ರಾಮ್ ರಹೀಂ ಸಿಂಗ್‌ಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟ ಮಾಡುವ ಹಿನ್ನೆಲೆಯಲ್ಲಿ ರೋಹ್ಟಕ್ ಜೈಲಿನ ಸುತ್ತಮುತ್ತ ಬಹುಹಂತದ ಭದ್ರತೆಯನ್ನು ಒದಗಿಸಲಾಗಿದೆ. ಜೈಲಿನ ಸುತ್ತಮುತ್ತ ಅತ್ಯಕ ಸಂಖ್ಯೆಯಲ್ಲಿ ಅನುಯಾಯಿಗಳು ನೆರೆಯುವ ಹಿನ್ನೆಲೆಯಲ್ಲಿ ಯಾವುದೇ ಆಕಸ್ಮಿಕ ಘಟನೆಗಳು ಜರುಗಬಹುದಾಗಿದ್ದು, ಈ ಹಿನ್ನೆಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ, ರೋಹ್ಟಕ್ ನಗರದ ಸುನಾರಿಯಾ ಜೈಲು ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಪಡೆ ಸಿಬ್ಬಂದಿ ನಿಯೋಜಿಸಲಾಗಿದೆ. ಅತ್ಯಕ ಸಂಖ್ಯೆಯಲ್ಲಿ ಜೈಲು ಸುತ್ತಮುತ್ತಲೂ ಕೂಡ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.
ರೋಹ್‌ಟಕ್ ರೇಂಜ್‌ನ ಐಜಿ ನವ್‌ದೀಪ್ ವಿರ್ಕ್ ಅವರು ಭದ್ರತೆಗೆ ಹೆಚ್ಚಿನ ಒತ್ತು ನೀಡಿದ್ದಾಗಿ ಹೇಳಿದ್ದಾರೆ. ಯಾವುದೇ ಅಹಿತಕರವಾದ ಘಟನೆಗಳು ನಡೆಯಬಹುದಾದ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ವಿರ್ಕ್ ಹೇಳಿದ್ದಾರೆ. ರೋಹ್‌ಟಕ್ ಡೆಪ್ಯುಟಿ ಕಮಿಷನರ್ ಅತುಲ್ ಕುಮಾರ್ ಅವರು ಜಿಲ್ಲೆಯ ಭದ್ರತಾ ವ್ಯವಸ್ಥೆ ಸಂಪೂರ್ಣ ನಿಯಂತ್ರಣದಲ್ಲಿದೆ. ಅತ್ಯಕ ಪೊಲೀಸ್ ಪಡೆಗಳು, ಅರೆಸೇನಾಪಡೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಗೆ ಯಾವುದೇ ವ್ಯಕ್ತಿಯೂ ಹೊರಗಿನಿಂದ ಪ್ರವೇಶ ಪಡೆಯುವ ಮುನ್ನಾ ಸಂಪೂರ್ಣ ಭದ್ರತಾ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಸ್ಥಳದಲ್ಲಿ 144ನೇ ಸೆಕ್ಷನ್ ಜಾರಿ ಮಾಡಿದ್ದು, ಗುಂಪು ಗೂಡಿ ನಿಂತಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.
ಮೊಬೈಲ್ ಇಂಟರ್ನೆಟ್ ಸ್ಥಗಿತ
ಯಾವುದೇ ರೀತಿಯಾದ ಗಾಳಿ ಸುದ್ದಿಗಳು ಹರಡದಂತೆ ತಡೆಯುವ ಸಲುವಾಗಿ ಪಂಜಾಬ್ ಹಾಗೂ ಹರ್ಯಾಣದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮಂಗಳವಾರದವರೆಗೂ ಕೂಡ ಸ್ಥಗಿತಗೊಳಿಸುವುದಾಗಿ ಅಕಾರಿಗಳು ತಿಳಿಸಿದ್ದಾರೆ.
ಕ್ಯಾಮರಮೆನ್‌ಮೇಲೆ ದಾಳಿ 
ಸಿರ್ಸಾದಲ್ಲಿರುವ ಡೇರಾಗೆ ನುಗ್ಗಲು ಯತ್ನಿಸಿದ್ದ ಸುದ್ದಿವಾಹಿನಿಯೊಂದರ 35 ವರ್ಷದ ಸುನಿಲ್ ಕುಮಾರ್ ಎಂಬ ಕ್ಯಾಮರಾಮೆನ್ ಮೇಲೆ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅನುಯಾಯಿಗಳು ದಾಳಿ ಮಾಡಿದ್ದಾರೆ. ಕ್ಯಾಮರಾಗೆ ಹಾನಿಯುಂಟು ಮಾಡಿದ್ದಾರೆ. ಅಲ್ಲದೆ, ಈ ವೇಳೆ ಆತನ ಕಾಲಿಗೆ ಗಂಭೀರವಾದ ಗಾಯಗಳಾಗಿವೆ ಎನ್ನಲಾಗಿದೆ.

LEAVE A REPLY