ಕಾಸರಗೋಡು ಜಿಲ್ಲೆಗೆ ಓಣಂ ಉಡುಗೊರೆ: ಕೇರಳ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ಸೇವೆ 

file photo
ಕಾಞಂಗಾಡು: ಕಾಸರಗೋಡು ಜಿಲ್ಲೆಗೆ ಓಣಂ ಉಡುಗೊರೆಯಾಗಿ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸರ್ವೀಸ್ ನಡೆಸಲಿವೆ. ಕೇರಳ ಮತ್ತು  ಕರ್ನಾಟಕದ ವಿವಿಧ ನಗರಗಳಿಗೆ ತೆರಳುವ ಅಕ ದೂರ ಬಸ್ ಸೇವೆ ಕೂಡ ಇದರಲ್ಲಿ  ಒಳಗೊಂಡಿವೆ. ಕಾಞಂಗಾಡಿನಿಂದ ೧೦ ಹೊಸ ಬಸ್‌ಗಳನ್ನು  ಮಂಜೂರು ಮಾಡಲಾಗಿದೆ.
ಕಾಸರಗೋಡು ಮತ್ತು  ಕಣ್ಣೂರು ಜಿಲ್ಲೆಗಳ ಮಲೆನಾಡು ವಲಯದ ಮೂಲಕ ಕೋಟ್ಟಾಯಂ, ಪತ್ತನಂತಿಟ್ಟ  ಮೊದಲಾದ ಕೇಂದ್ರಗಳಿಗೆ ನೂತನ ಸರ್ವೀಸ್ ಆರಂಭಿಸಲಾಗಿದೆ. ಈ ಮೂಲಕ ಮಲೆನಾಡು ವಲಯವನ್ನೂ  ಗಣನೆಗೆ ತೆಗೆಯಲಾಗಿದೆ. ಈಸ್ಟ್ ಎಳೇರಿಯ ತಯ್ಯೇಯಿಲ್‌ನಿಂದ ಮುಂಜಾನೆ ೪.೪೦ಕ್ಕೆ ಹೊರಟು ಪಾಲಾವಯಲು, ಚಿತ್ತಾರಿಕ್ಕಲ್, ಕುನ್ನುಂಗೈ, ನೀಲೇಶ್ವರ ಮೂಲಕ ಬೆಳಿಗ್ಗೆ  ೮.೩೦ಕ್ಕೆ ಮಂಗಳೂರಿಗೆ ತಲುಪುವ ರೀತಿಯಲ್ಲಿ  ಹಾಗೂ ಪಾಣತ್ತೂರಿನಿಂದ ಮುಂಜಾನೆ ೪.೪೦ಕ್ಕೆ ಹೊರಟು ಚಾಮುಂಡಿಬೆಟ್ಟ , ಬಂದಡ್ಕ, ಪೊಯಿನಾಚಿ ಮುಖಾಂತರ ಬೆಳಿಗ್ಗೆ  ೭.೧೫ಕ್ಕೆ ಮಂಗಳೂರಿಗೆ ತಲುಪುವ ರೀತಿಯಲ್ಲಿ  ನೂತನ ಸರ್ವೀಸ್‌ಗಳನ್ನು  ಮಂಜೂರುಗೊಳಿಸಲಾಗಿದೆ.
ಪ್ರಾತಃಕಾಲ ೫.೧೦ಕ್ಕೆ ಎಳೇರಿತಟ್ಟ್‌ನಿಂದ ಹೊರಟು ವೆಳ್ಳರಿಕುಂಡು, ಪರಪ್ಪ , ಕಾಞಂಗಾಡು, ಕಾಸರಗೋಡು ಮೂಲಕ ಬೆಳಿಗ್ಗೆ  ೮.೫೦ಕ್ಕೆ ಮಂಗಳೂರಿಗೆ ಬಸ್ ಸೇವೆ ನಡೆಯಲಿದೆ. ಬೆಳಿಗ್ಗೆ  ೬.೫೫ಕ್ಕೆ ಪಾಣತ್ತೂರಿನಿಂದ ಆರಂಭಗೊಂಡು ಮಾನಡ್ಕ, ಬಂದಡ್ಕ ಮೂಲಕ ೮.೫೦ಕ್ಕೆ ಮಂಗಳೂರಿಗೆ ತಲುಪುವ ಮತ್ತು  ಬೆಳಿಗ್ಗೆ  ೭.೩೦ಕ್ಕೆ ಅಡೂರಿನಿಂದ ಹೊರಟು ಅತ್ತನಾಡಿ ಸೇತುವೆ ಮೂಲಕ ೯.೫೦ಕ್ಕೆ ಮಂಗಳೂರಿಗೆ ತಲುಪುವ ಸರ್ವೀಸ್‌ಗಳನ್ನು  ಮಂಜೂರು ಮಾಡಲಾಗಿದೆ.
ಕಣ್ಣೂರು ಜಿಲ್ಲೆಯ ಮಲೆನಾಡು ಗ್ರಾಮವಾದ ಚೀಕ್ಕಾಡ್‌ನಿಂದ ಬೆಳಿಗ್ಗೆ  ೬.೧೦ಕ್ಕೆ ಹೊರಟು ಆಲಂಗೋಡು, ಚೆರುಪ್ಪುಯ, ಭೀಮನಡಿ, ಪೆರಿಯಂಙಾನ, ಕಾಞಂಗಾಡು ಮೂಲಕ ಬೆಳಿಗ್ಗೆ  ೧೦.೪೫ಕ್ಕೆ ಕಾಸರಗೋಡಿಗೆ ಆಗಮಿಸುವ ಬಸ್ ಶೀಘ್ರದಲ್ಲೇ ಸೇವೆ ಆರಂಭಿಸಲಿದೆ. ಅದರಂತೆ ಕಾಞಂಗಾನಿಂದ ಕಾಸರಗೋಡಿಗೆ ಅನೇಕ ಬಸ್‌ಗಳನ್ನು  ಸೇವೆಗೆ ಅಳವಡಿಸಲಾಗುತ್ತಿದೆ.
ರಾತ್ರಿ ೯.೩ಕ್ಕೆ ಮಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ  ೯.೨೫ಕ್ಕೆ ಗುರುವಾಯೂರು ತಲುಪುವ ರೀತಿಯಲ್ಲಿ  ಫಾಸ್ಟ್  ಪ್ಯಾಸೆಂಜರ್ ಬಸ್ ಸರ್ವೀಸ್ ಮಂಜೂರುಗೊಳಿಸಲಾಗಿದೆ. ಕಾಞಂಗಾಡು ಡಿಪ್ಪೋದಿಂದ ಮಂಗಳೂರಿಗೆ ಏಳು, ಮೈಸೂರು, ಪತ್ತನಂತಿಟ್ಟ , ಕುಮಳಿ- ಕಟ್ಟಪ್ಪನಗೆ ತಲಾ ಒಂದು ನೂತನ ಬಸ್ ಸೇವೆ ಆರಂಭವಾಗಲಿದೆ. ತಲಶ್ಶೇರಿ ಡಿಪ್ಪೋದಿಂದ ಚೆರುಪುಯ- ವೆಳ್ಳರಿಕುಂಡು- ಮಂಗಳೂರು ಮೂಲಕ ಕೊಲ್ಲೂರಿಗೆ ಹೊಸ ಬಸ್ ಸರ್ವೀಸ್ ಆರಂಭವಾಗಲಿದೆ.
ಸಿಬ್ಬಂದಿಗಳ ಕೊರತೆ: ವ್ಯವಸ್ಥೆಗೆ ತೊಡಕು 
ನೂತನ ಸರ್ವೀಸ್‌ಗಳಿಗಿರುವ ಬಸ್‌ಗಳು ಆಯಾ ಡಿಪ್ಪೋಗಳಿಗೆ ತಲುಪಿದ್ದರೂ, ನೌಕರರ ಅಭಾವ ಕಾರಣದಿಂದ ಬಸ್ ಸೇವೆ ಆರಂಭಿಸಲು ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೆಚ್ಚುವರಿ ಸಿಬ್ಬಂದಿಗಳನ್ನು  ನಿಯೋಜಿಸಿ ಓಣಂ ಹಬ್ಬಕ್ಕಿಂತ ಮೊದಲು ಬಸ್ ಸೇವೆ ಆರಂಭಿಸಲು ಅಕಾರಿಗಳು ಯೋಜನೆ ರೂಪಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಕೆಎಸ್‌ಆರ್‌ಟಿಸಿ ಮಂಡಳಿ ಸದಸ್ಯ ಟಿ.ಕೆ.ರಾಜನ್ ಅವರ ಪರಿಶ್ರಮದಿಂದ ಜಿಲ್ಲೆಗೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳು ಮಂಜೂರಾಗಿವೆ.

LEAVE A REPLY