ಬಾಡಿಗೆ ಮನೆಯಲ್ಲಿ ಮಾಟ ಮಂತ್ರ, ಗ್ರಾಹಕರನ್ನು ಸೆಳೆಯಲು ಬಗೆಬಗೆಯ ತಂತ್ರ… ಕೊಡಗಿನಲ್ಲಿ `ರಾಮ್‌ ರಹೀಮ್ ‘ ಬಂಧನ

Hosadigantha photo
ಸಿದ್ದಾಪುರ: ಕೊಂಡಂಗೇರಿಯಲ್ಲಿ ಮಾಟ, ಮಂತ್ರದ ಹೆಸರಲ್ಲಿ ದಂಧೆ ಪ್ರಾರಂಭಿಸಿದ್ದ ರಾಮ್ ರಹೀಮ್ ಎಂಬಾತ ನನ್ನು   ಸಿದ್ದಾಪುರ ಪೊಲೀಸ್ ಬಂಧಿಸಿ ವಿಚಾರಣೆಗೊಳ ಪಡಿಸಿದ್ದಾರೆ.  ಈ ರಾಮ್ ರಹೀಮ್‌ನ ಹಾವಳಿಯಿಂದ  ರೋಸಿಹೋದ ಗ್ರಾಮಸ್ಥರು ಹಾಲುಗುಂದ ಪಂಚಾಯ್ತಿಗೆ ದೂರು ನೀಡಿದ್ದರು.  ಗ್ರಾಮಸ್ಥರ ಪರವಾಗಿ ಪಂಚಾಯ್ತಿ ಅಧ್ಯಕ್ಷ ಸಾದಲಿ, ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ ಹಿನ್ನಲೆ ಈ ರಾಮ್ ರಹೀಮ್ ಎಂಬ ವ್ಯಕ್ತಿಯನ್ನು  ಬಂಧಿಸಿದ್ದಾರೆ.
ಎಲ್ಲಿಯವನು ಈ ರಾಮ್‌ರಹೀಮ್? 
ಮೂಲತಃ ಕೇರಳದ ಮಾನಂದವಾಡಿಯ ಅನ್ವರ್ ಸಾದತ್ ಅಲಿಯಾಸ್ ರಾಮ್ ರಹೀಮ್ ಎಂಬಾತ ಮೂರು ತಿಂಗಳ ಹಿಂದೆ ಕೊಂಡಂಗೇರಿಗೆ ಬಂದು ಮನೆಯೊಂದನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದ. ಈ ಬಾಡಿಗೆ ಮನೆಯ ಮುಂದೆ ಆಯುರ್ವೇದಿಕ್ ಔಷಧಿ ನೀಡುವ ಫಲಕ ಹಾಕಿಕೊಂಡು ಮಾಟ ಮಂತ್ರ ಯಂತ್ರ ತಂತ್ರ ಮಾಡುತ್ತಿದ್ದ ಮಾತ್ರವಲ್ಲದೇ ಜನರನ್ನು ತನ್ನೆಡೆಗೆ ಸೆಳೆಯಲು ಕೆಲವು ಏಜೆಂಟ್‌ಗಳನ್ನು ನೇಮಿಸಿದ್ದ.
ಕೇರಳ ನೋಂದಣಿಯ ಕಾರುಗಳು ಬರುತ್ತಿತ್ತು
ಈ ಏಜೆಂಟ್‌ಗಳು ಕೇರಳ ನೋಂದಣಿಯ ಕಾರುಗಳಲ್ಲಿ ಪಿರಿಯಾಪಟ್ಟಣ, ಕುಶಾಲನಗರ, ಸಿದ್ದಾಪುರ, ನೆಲ್ಯಹುದಿಕೇರಿಗಳಿಂದ ಜನರನ್ನು ಈ ರಾಮ್ ರಹೀಮ್ ಬಳಿ ಕರೆತರುತ್ತಿದ್ದರೆನ್ನಲಾಗಿದೆ.  ಈತನ ಮನೆಯಲ್ಲಿ ಮಧ್ಯರಾತ್ರಿ ಕೂಡಾ ಮಹಿಳೆಯರು ಹಾಗೂ  ಜನ ಬರುತ್ತಿದ್ದರಿಂದ ಗ್ರಾಮಸ್ಥರು ಈತನ ವರ್ತನೆಯ ವಿರುದ್ಧ ಅಸಮಾಧಾನಗೊಂಡಿದ್ದರು. ಮಾತ್ರವಲ್ಲದೇ ಈತನ ವ್ಯವಹಾರ ಸುಗಮವಾಗಿ ನಡೆಯಲು ಗ್ರಾಮ ಪಂಚಾಯ್ತಿಗೆ ಲೈಸೆನ್ಸ್ ನೀಡುವಂತೆ ಅರ್ಜಿ ಕೂಡಾ ಸಲ್ಲಿಸಿದ್ದ.
ಕೆಲ ಪಂಚಾಯ್ತಿ ಸದಸ್ಯರು ಕೂಡಾ ಈ ರಾಮ್ ರಹೀಮ್ ಪರ ಬೆಂಬಲ ಕೂಡಾ ನೀಡಿದ್ದರು. ಪಂಚಾಯ್ತಿ ಅಧ್ಯಕ್ಷ ಸಾದಲಿ ನೀಡಿದ ದೂರಿನಂತೆ ಸಿದ್ದಾಪುರ ಪೊಲೀಸರು ಸ್ಥಳಕ್ಕೆ ತೆರಳಿ ಈ ರಾಮ್ ರಹೀಮ್‌ನನ್ನು ವಿಚಾರಣೆಗೆ ಒಳಪಡಿಸಿದರು. ಈ ಸಂದರ್ಭ ಕೆಲ ಕಾಲ ಇತನ ಪರ ವಹಿಸಿ ವ್ಯಕ್ತಿಗಳು ಮತ್ತು ಗ್ರಾಮಸ್ಥರ ನಡುವೆ ಮತಿನ ಚಕಮಕಿ ನಡೆದಿದೆ ಪೋಲಿಸರು ತಕ್ಷಣ ಇತನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಪೊಲೀಸರ ಮಧ್ಯಪ್ರವೇಶದಿಂದ ರಾಮ್ ರಹೀಮ್ ಅಲಿಯಾಸ್ ಅನ್ವರ್ ಸಾದತ್ ಕೊಂಡಂಗೇರಿಯಿಂದ ಗಂಟುಮೂಟೆ ಕಟ್ಟುವಂತಾಯಿತು. ಜನರನ್ನು ವಂಚಿಸುತ್ತಿದ್ದ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.  ಈ ಸಂದರ್ಭ ಮಹಮ್ಮದ್, ಅಂದಾಯಿ, ಜಕ್ರೀಯ, ಅಹಮ್ಮದ್, ಅಬ್ದುಲ್, ಇಬ್ರಾಯಿಂ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಇನ್ನು ಮುಂದೆ ಇಲ್ಲಿಗೆ ಬರಲ್ಲ
ತಾನು ಆಯುರ್ವೇದ ಮದ್ದು ನೀಡುತ್ತಿದ್ದೇನೆ ಇನ್ನು ಮುಂದೆ ಇಲ್ಲಿ ಇರುವುದಿಲ್ಲ. ತಾನು ವಾಪಾಸು ಮಾನಂದವಾಡಿಗೆ ತೆರಳುತ್ತೇನೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾನೆ. ಊರಿಗೆ ಹೋಗುವಾಗ ತನಗೆ ಪೊಲೀಸರು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾನೆ. ಇದರಿಂದ ಗ್ರಾಮಸ್ಥರು ನಿರಾಳರಾಗಿದ್ದಾರೆ.
ಜನ ನೋಡಿ ವೇಷ ಬದಲಾವಣೆ!
ಕೊಂಡಂಗೇರಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಈತ ಯಾವ ಧರ್ಮದ ಜನರು ತನ್ನ ಬಳಿ ಬರುತ್ತಾರೋ ಅವರ ಧರ್ಮಕ್ಕೆ ಅನುಸಾರವಾಗಿ ತನ್ನ ವೇಷ ಬದಲಿಸಿ ಕೊಳ್ಳುತ್ತಿದ್ದ ಎನ್ನಲಾಗಿದ್ದು, ಮಧ್ಯರಾತ್ರಿಯಲ್ಲಿ ಮಹಿಳೆಯರನ್ನು ತನ್ನ ಸೇವಕರಾಗಿ ನೇಮಿಸಿ ಕೊಂಡಿದ್ದ ಎನ್ನಲಾಗಿದೆ. ಈತನ ಚಟುವಟಿಕೆಗಳಲ್ಲಿ ಸಂಶಯಗೊಂಡ ಗ್ರಾಮಸ್ಥರು ರವಿವಾರ ಈತನ ಕೋಣೆಯೆಳಗೆ ನುಗ್ಗಿದಾಗ ಕತ್ತಲ ಕೋಣೆಯೊಂದರಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡು ಗೂಸಾ ನೀಡಿ ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೇರಳ ನಿವಾಸಿಯಾಗಿರುವ ಈತನ ಮೇಲೆ ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗುತ್ತಿದ್ದು, ಸಾದಾತ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

LEAVE A REPLY