200 ಹೊಸ ಕರೆನ್ಸಿ ನೋಟು ಎಟಿಎಂನಲ್ಲಿ ಸಿಗುತ್ತಾ ?

ಹೊಸದಿಲ್ಲಿ: ಕೇಂದ್ರ ಸರ್ಕಾರ 500 ರೂ. ಮತ್ತು 1,000 ರೂ. ಮುಖ ಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯ ಮಾಡುವ ನಿರ್ಧಾರ ಘೋಷಿಸಿದ 10 ತಿಂಗಳ ಬಳಿಕ ಆರ್‌ಬಿಐ ಶುಕ್ರವಾರ 200 ರೂ. ಮುಖಬೆಲೆಯ ಹೊಸ ಕರೆನ್ಸಿ ನೋಟನ್ನು ಪರಿಚಯಿಸಿತ್ತು. ಅದೇನಿದ್ದರೂ ಹೊಸ 200 ರೂ. ನೋಟು ಎಟಿಎಂ ಮೂಲಕ ಜನರಿಗೆ ವಿತರಿಸಲಾಗುವುದಿಲ್ಲ. ಅವುಗಳನ್ನು ಕೇವಲ ಬ್ಯಾಂಕ್‌ಗಳ ಮೂಲಕ ಚಲಾವಣೆಗೆ ತರಲಾಗಿದೆ. 10 ರೂ, 20 ರೂ. ಮತ್ತು 50 ರೂ. ಕರೆನ್ಸಿ ನೋಟುಗಳು ಕೂಡ ಎಟಿಎಂನಲ್ಲಿ ಲಭ್ಯವಿಲ್ಲ. ಅದೇ ರೀತಿ ಹೊಸ 200 ರೂ. ನೋಟನ್ನು ಅವುಗಳ ಗುಂಪಿಗೆ ಸೇರಿಸಲಾಗಿದೆ. ಯಾಕೆಂದರೆ ಹೊಸ ಕರೆನ್ಸಿಗಾಗಿ ಎಟಿಎಂನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಟಿಎಂನನ್ನು ಪುನಾರೂಪಿಸದಿರುವ ಕಾರಣ ಎಟಿಎಂಗೆ ಹೊಸ ಕರೆನ್ಸಿ ನೋಟನ್ನು ನಿರ್ವಹಿಸಲು ಆಗುವುದಿಲ್ಲ. 500 ರೂ. ನೋಟಿನ ಗಾತ್ರಕ್ಕಿಂತ 200 ರೂ. ಚಿಕ್ಕದಿರುವುದರಿಂದ 2 ಲಕ್ಷ ಎಟಿಎಂಗಳಲ್ಲಿ ಬದಲಾವಣೆ ತರಬೇಕಾಗುತ್ತದೆ. ಇದರಿಂದಾಗಿ ಎಟಿಎಂಗೆ 200 ರೂ. ಬರಲು ಕೆಲವು ವಾರಗಳು ಬೇಕು. ತಂತ್ರಜ್ಞರು ಪ್ರತೀ ಎಟಿಎಂ ಯಂತ್ರಗಳ ಬಳಿ ತೆರಳಿ ಅವುಗಳನ್ನು ಪುನರೂಪಿಸಬೇಕು. ಆ ಬಳಿಕ 200 ರೂ. ಎಟಿಎಂಗಳಲ್ಲಿ ಲಭ್ಯವಾಗಲಿದೆ.

LEAVE A REPLY