ಜೈಲು ಕೊಠಡಿಯ ನೆಲದಲ್ಲಿಯೇ ಮಲಗಿ ರಾತ್ರಿ ಕಳೆದ ಕೈದಿ ನಂ.1997!

ಚಂಡೀಗಢ: ದೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಈಗ ಭದ್ರತೆಯ ಕಾರಣಕ್ಕಾಗಿ ರೋಹ್ಟಕ್ ಜೈಲಿಗೆ ಕರೆತರಲಾಗಿದ್ದು, 1997 ಖೈದಿ ನಂಬರ್ ನೀಡಲಾಗಿದೆ.
ಶುಕ್ರವಾರ ಸಿಬಿಐ ನ್ಯಾಯಾಲಯ ರಾಮ್ ರಹೀಮ್ ಸಿಂಗ್‌ನನ್ನು ಅಪರಾಧಿ ಎಂದು ಘೋಷಿಸಿದ ಕೂಡಲೇ ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು, ರಾಮ್ ರಹೀಮ್ ಸಿಂಗ್ ಬೆಂಗಳೂರಿನ ಆಶ್ರಮಕ್ಕೆ ಬೀಗ ಜಡಿದಿದ್ದರು.
ವಿಐಪಿ ವ್ಯವಸ್ಥೆ ಇಲ್ಲ!
ಆತ ಸಾಮನ್ಯ ಖೈದಿಗಳಂತೆ ನೆಲದ ಮೇಲೆಯೇ ಮಲಗಿದ್ದಾನೆ. ರಾತ್ರಿ ಊಟ ಸೇವಿಸಿಲ್ಲ. ಮಲಗುವ ಮುನ್ನ ಹಾಲು ಕುಡಿದಿದ್ದಾನೆ, ರಾಮ್ ರಹೀಮ್‌ಗೆ ಯಾವುದೇ ವಿಐಪಿ ವ್ಯವಸ್ಥೆಗಳನ್ನು ಮಾಡಿಲ್ಲ ಹರ್ಯಾಣ ಸರಕಾರ ಹೇಳಿದೆ.
ಆತನಿಗೆ ಜೈಲಿನಲ್ಲಿ ಯಾವುದೇ ಎಸಿ ವ್ಯವಸ್ಥೆ ಮಾಡಿಲ್ಲ. ಜೈಲಿನ ಕೈಪಿಡಿಯಂತೆ ಆತನ ಮೇಲೆ ಇಬ್ಬರು ಖೈದಿಗಳು ನಿಗಾ ಇಟ್ಟಿದ್ದಾರೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ನಾಳೆ ಸಿಬಿಐ ವಿಶೇಷ ನ್ಯಾಯಾಲಯ ರಾಮ್ ರಮೀಮ್ ಸಿಂಗ್‌ಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

LEAVE A REPLY