ಹಿಂಸಾಚಾರ ನಷ್ಟ ಭರಿಸಲು ರಾಮ್ ರಹೀಮ್ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ

ಚಂಡೀಗಡ್: ಡೇರಾ ಸಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ.
ರಾಮ್ ರಹೀಮ್ ಸಿಂಗ್ ದೋಷಿ ಎಂಬ ತೀರ್ಪು ಹೊರಬೀಳುತ್ತಲೇ ಬೆಂಬಲಿಗರು ಹಿಂಸಾಚಾರಕ್ಕಿಳಿದಿದ್ದು, ಭಾರೀ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟಾಗಿದೆ. ಸಾವು ನೋವು ಕೂಡಾ ಸಂಭವಿಸಿದೆ. ಈ ಹಿಂಸಾಚಾರದಲ್ಲಿ ಹಾನಿಯ ವೆಚ್ಚ ಭರಿಸಿಕೊಳ್ಳಲು ದೋಷಿ ಗುರುಮಿತ್ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ.
ಹಿಂಸಾಚಾರ ನಿರತರು ಬಸ್, ರೈಲುಗಳಿಗೆ ಬೆಂಕಿ ಹಚ್ಚಿದ್ದಲ್ಲೇ, ಮಾಧ್ಯಮ ಪ್ರತಿನಿಧಿಗಳು, ಮಾಧ್ಯಮಗಳ ವಾಹನಗಳ ಮೇಲೂ ದಾಳಿ ನಡೆಸಿದ್ದಾರೆ. ಈ ಎಲ್ಲಾ ಹಾನಿಯನ್ನು ಭರಿಸಿಕೊಳ್ಳಲು ರಾಮ್ ರಹೀಮ್ ಸಿಂಗ್ ಆಸ್ತಿ ವಶಕ್ಕೆ ಪಡೆದುಕೊಳ್ಳಬೇಕು, ಪಂಚಕುಲಿಯಲ್ಲಿ ಭದ್ರತೆ ಹೆಚ್ಚಿಸಬೇಕು ಎಂದೂ ಹೈಕೋರ್ಟ್ ಆದೇಶಿಸಿದೆ.

LEAVE A REPLY