ಇದು ಇಲಿಯ ಪಕ್ಕಕ್ಕೆ ಕೂರಿಸಿದರೆ ಅದಕ್ಕಿಂತ ದುಪ್ಪಟ್ಟ ಪಟ್ಟು ಚಿಕ್ಕದು!

 • ಮಂಜೇಶ್ ವಿಶ್ವನಾಥ್
  ನೋಡಲಿಕ್ಕೆ ಇಲಿಯ ಮಾದರಿಯಲ್ಲೇ ಇರುವ ಈ ಪ್ರಾಣಿಯ ಇಲಿಗಳಿಗಿಂತ ಅದೆಷ್ಟೋ ಪಟ್ಟು ಸಣ್ಣದು ಎಂದರೆ ನಿಮಗೆ ಅಚ್ಚರಿಯಾಗಬಹುದು. ಏಕೆಂದರೆ, ಆನೆ ಜೊತೆ ಯಾವಾಗಲೂ ಇಲಿಯನ್ನೇ ಹೊಲಿಕೆ ಮಾಡುವ ನಮಗೆ, ಅದೇ ಚಿಕ್ಕ ಪ್ರಾಣಿಯಂತೆ ಕಾಣುತ್ತದೆ. ಇಲಿಯ ಪಕ್ಕಕ್ಕೆ ಇಟ್ರುಸ್ಕಾನ್ ಶ್ರೂ ಕೂರಿಸಿದರೆ ಅದಕ್ಕಿಂತಲೂ ದುಪ್ಪಟ್ಟ ಪಟ್ಟು ಚಿಕ್ಕದಾಗಿದೆ. ಹೀಗಾಗಿ ಇದನ್ನು ಅತೀ ಸಣ್ಣ ಭೌತಿಕ ಪ್ರಾಣಿ ಎಂದು ಕರೆಯುತ್ತಾರೆ.
  ಇಟ್ರುಸ್ಕಾನ್ ಶ್ರೂ , ಇಟ್ರುಸ್ಕಾನ್ ಪ್ಯಾಗ್ಮಿ ಶ್ರೂ ಅಥವಾ ವೈಟ್ ಟೂಥೆಡ್ ಪ್ಯಾಗ್ಮಿ ಶ್ರೂ ಎಂದೆಲ್ಲ ಇದನ್ನು ಗುರುತಿಸಲಾಗುತ್ತದೆ. ಸಸ್ತನಿಗಳಲ್ಲೇ ಅತೀ ಸಣ್ಣದಾಗಿರುವ ಇದು ಸರಾಸರಿ 1.8 ಗ್ರಾಂ ತೂಕವಿರುತ್ತದೆ. ಇದರ ಒಟ್ಟಾರೆ ದೇಹದ ಉದ್ದ, ಬಾಲವೂ ಸೇರಿದಂತೆ 4 ಸೆಂಟರ್ ಮೀಟರ್ (1.6 ಇಂಚು) ಮಾತ್ರವೇ. ಸಣ್ಣ ಹಾಗೂ ಮೃದವಾದ ಕೂದಲನ್ನು ಹೊಂದಿದ್ದು, ಬೂದು-ಕಂದು ಬಣ್ಣದಲ್ಲಿರುತ್ತದೆ.
  ಅತೀ ಚಿಕ್ಕ ಕಾಲುಗಳನ್ನು ಹೊಂದಿರುವುದು ಇದರ ಮತ್ತೊಂದು ವಿಶೇಷ. ಇದರ ಅತೀ ಸಣ್ಣ ಕಾಲುಗಳಲ್ಲಿಯೇ ಅತ್ಯಂತ ವೇಗವಾಗಿ ಚಲಿಸುತ್ತದೆ. ಹೀಗಾಗಿ ಇದರ ಜೀರ್ಣಶಕ್ತಿ ತುಂಬಾ ಚೆನ್ನಾಗಿದ್ದು, ತನ್ನ ದೇಹದ ತೂಕದಷ್ಟೆ ಆಹಾರವನ್ನು ದಿನಕ್ಕೆ 1.5 ರಿಂದ 2 ಸಲ ಸೇವಿಸುತ್ತದೆ. ಇನ್ನು ಮರಿಗಳಿಗೆ ಕಶೇರುಕಗಳು ಹಾಗೂ ಅಕಶೇರುಕಗಳನ್ನು ನೀಡುತ್ತದೆ. ಬಹುತೇಕವಾಗಿ ಬೇಟೆಯಾಡಿದ ಕೀಟಗಳನ್ನು ಮರಿಗಳ ಗಾತ್ರದಷ್ಟನ್ನೇ ಪ್ರತ್ಯೇಕವಾಗಿ ನೀಡುತ್ತದೆ. ಇರುವೆ, ಮಿಡತೆ ಹಾಗೂ ಇತರೆ ಕಿಟಗಳು ಇವುಗಳ ಆಹಾರವಾಗಿರುತ್ತವೆ.
  ಯಾವಗಲೂ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿರುತ್ತವೆ ಮತ್ತು ಸದಾ ಚಟುವಟಿಕೆಯಿಂದ ಕೂಡಿರುತ್ತವೆ. ಇದನ್ನು ನೋಡಿದರೆ, ಅದಕ್ಕೆ ಶಕ್ತಿಯ ಪ್ರಮಾಣ ಹೆಚ್ಚಿನದಾಗಿ ಬೇಕು ಎಂಬುದು ಎಂತಹವರ ಗಮನಕ್ಕೂ ಬರುತ್ತದೆ. ಇನ್ನು ತನ್ನ ಆಹಾರವನ್ನು ಹುಡುಕಿಕೊಳ್ಳುವುದಕ್ಕೆ ಅದರ ಉದ್ದನೆಯ ಮೂಗು ಸಹಾಯವನ್ನು ಮಾಡುತ್ತದೆ. ವಿಚಿತ್ರ ಎಂದರೆ ಇದಕ್ಕೆ ಕಣ್ಣಾಗಲಿ ಅಥವಾ ಅದರ ಮುಂಗಾಲಗಲಿ ಆಹಾರವನ್ನು ಹುಡುಕಲಿಕ್ಕೆ ಹಾಗೂ ಸೇವಿಸುವುದಕ್ಕೆ ಸಹಾಯ ಮಾಡುವುದಿಲ್ಲ ಎನ್ನುವುದು.
  ಬೆಚ್ಚನೆಯ ಹಾಗೂ ಒದ್ದೆಯ ಹವಮಾನದಲ್ಲಿ ವಾಸವಿರುವ ಶ್ರ್ಯೂಗಳು, 10 ಸೆಲ್ಸಿಯಸ್ ನಿಂದ 30 ಸೆಲ್ಸಿಯಸ್‌ನ ಉತ್ತರ ಅಕ್ಷಾಂಶ ರೇಖೆಯ ಯುರೋಪ್ ಮತ್ತು ಉತ್ತರ ಆಫ್ರಿಕಾದಿಂದ ಮಲೇಷ್ಯಾವರೆಗೂ ಕಂಡುಬರುತ್ತವೆ.
  ಸಾಮನ್ಯವಾಗಿ ಇವು ಒಂದೇ ಕಡೆ ಇರುವುದಿಲ್ಲ. ಹಾಗೇನಾದರು ಇದೆ ಎಂದಾದರೆ ಅದು ತರಗೆಲಗಳ ಕೆಳಗೆ ಮಾತ್ರವೇ ಇರುತ್ತದೆ. ಅದು ಕೂಡ ೩೦ ನಿಮಿಷಕ್ಕಿಂತಲೂ ಹೆಚ್ಚಿನ ಕಾಲ ಹೀಗೆ ಸುಮ್ಮನೆ ಇರಲಾರವು. ಹಾಗೇನಾದರೂ ಇದೆ ಎಂದಾದರೆ ಅದು ಸಂತಾನೋತ್ಪತ್ತಿಯ ಕಾಲವಾಗಿರುತ್ತದೆ. ವಂಶಾಭಿವೃದ್ಧಿಯ ಕಾಲದಲ್ಲಿ ಸಾಮನ್ಯವಾಗಿ ಜೋಡಿ ಶ್ರೂ ಗಳು ಒಟ್ಟಾಗಿ ಹಾಗೂ ಶಾಂತಿಯುತವಾಗಿ ಇರಲು ಬಯಸುತ್ತವೆ. ಆದರೆ, ಈ ವಿಷಯದ ಬಗ್ಗೆ ಹೆಚ್ಚು ಅಧ್ಯಯನ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಅನಿಮಲ್ ಡೈವರ್ಸಿಟ್ ಅಂತರ್ಜಾಲ ತಾಣವು ಹೇಳಿಕೊಂಡಿದೆ. ಏಕೆಂದರೆ ಇವುಗಳನ್ನು ಹಿಡಿಯುವುದಕ್ಕೆ ಸಾಧ್ಯವಾಗದೆ ಇರುವುದು ಹಾಗೂ ಸಣ್ಣ ಗಾತ್ರವನ್ನು ಹೊಂದಿರುವುದು ಎಂಬ ಕಾರಣವನ್ನು ನೀಡಿದೆ.  ತನ್ನ ರಕ್ಷಣೆಯನ್ನು ಮಾಡಿಕೊಳ್ಳುವುದಕ್ಕಾಗಿ ವಿಶೇಷ ಶಬ್ದವನ್ನು ಹೊರಹಾಕುತ್ತದೆ. ಹಾಗೂ ದಾಳಿ ಮಾಡುವವರ ವಿರುದ್ಧ ಪ್ರತಿದಾಳಿಯನ್ನು ಮಾಡುವುದಕ್ಕೂ ಹಿಂಜರಿಯುವುದಿಲ್ಲ.
  ಮನುಕುಲಕ್ಕೆ ಇವುಗಳಿಂದ ಯಾವುದೇ ರೀತಿಯ ದುಷ್ಪರಿಣಾಮಗಳು ಇಲ್ಲ. ಕೀಟಗಳನ್ನು ನಿಯಂತ್ರಣ ಮಾಡುವುದರಿಂದ ಇದು ಒಂದು ರೀತಿಯಲ್ಲಿ ಸಹಾಯಕನಾಗಿಯೇ ಇದೆ. ಅಲ್ಲದೆ, ಪರಿಸರವನ್ನು ಆರೋಗ್ಯಕರವಾಗಿ ಇಡಲು ಇದು ಸಹಾಯಕವಾಗಿದೆ.

LEAVE A REPLY